Sampradayada Hadugalu

Indian culture is very distinct with Music & literature being its important pillars. Every festival, auspicious day and daily religious-cultural activities celebrated by the followers of this culture is incomplete without literature and music which combine together in the form of songs.

This book compiles the various traditional devotional songs sung during different festivals and auspicious days which have been passed on from generation to generation.

 

ಸಂಪ್ರದಾಯದ ಹಾಡುಗಳು

ಸಂಗ್ರಾಹಕರು: ಶ್ರೀಮತಿ ಜಗ್ಗೂ ಶೆಲ್ವನಯಕಿ

 

ಭಾರತೀಯ ಸಂಸ್ಕೃತಿ ಅತ್ಯಂತ ವೈಶಿಷ್ಟ್ಯಪೂರ್ಣವಾದದ್ದು. ಸಂಗೀತ ಮತ್ತು ಸಾಹಿತ್ಯಗಳು ಈ ಸಂಸ್ಕೃತಿಯ ಆಧಾರಸ್ತಂಭಗಳಿದ್ದಂತೆ. ಈ ಸಂಸ್ಕೃತಿಯನ್ನು ಅನುಸರಿಸುವವರು ಆಚರಿಸುವ ಪ್ರತಿಯೊಂದು ಹಬ್ಬ-ಹರಿದಿನಗಳು, ಶುಭಕಾರ್ಯಗಳು ಹಾಗೂ ದೈನಂದಿನವಾದ ಧಾರ್ಮಿಕ-ಸಾಂಸ್ಕೃತಿಕ ಚಟುವಟಿಕೆಗಳು, ಸಾಹಿತ್ಯ-ಸಂಗೀತಗಳಿಲ್ಲದೆ ಪೂರ್ಣವಾಗುವುದಿಲ್ಲ. ಆಯಾ ಸಂದರ್ಭಕ್ಕನುಗುಣವಾಗಿ ಸಂಸ್ಕೃತ ಹಾಗೂ ಪ್ರಾಂತೀಯ ಭಾಷೆಗಳಲ್ಲಿ ಉತ್ತಮ ಸಾಹಿತ್ಯದಿಂದ ಕೂಡಿದ, ಔಚಿತ್ಯಪೂರ್ಣ-ರಾಗಸಂಯೋಜನೆಯನ್ನು ಹೊಂದಿದ ಹಾಡುಗಳನ್ನು ಹಾಡಿ, ತನ್ಮೂಲಕ ಆಯಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲರ ಮನಸ್ಸನ್ನೂ ಸಂತೋಷಪಡಿಸಿ, ಭಗವಂತನ ಕೃಪೆಯನ್ನೂ ಉಂಟುಮಾಡುವ ಉತ್ತಮ ಸಾಧನಗಳಾಗಿವೆ, ಈ ‘ಸಂಪ್ರದಾಯದ ಹಾಡುಗಳು’. ಈ ಪುಸ್ತಕದ ಹೆಸರೇ ಸೂಚಿಸುವಂತೆ ಇಲ್ಲಿ ನೀಡಲಾಗಿರುವ ಹಾಡುಗಳಿಗೆ ತತ್ತ್ವ ಹಾಗೂ ಸಂಪ್ರದಾಯದ ಹಿನ್ನೆಲೆಯೂ ಉಂಟು. ಜೊತೆಗೆ, ಇದನ್ನು ಕ್ರಮಬದ್ಧವಾಗಿ ಹಾಡಿದಾಗ, ಕಲಾ ಕುಶಲತೆಯ ಅಭಿವ್ಯಕ್ತಿಯೂ ಆಗುತ್ತದೆ. ಈ ಹಾಡುಗಳು ಸಾತ್ವಿಕವಾದ ರೀತಿಯಲ್ಲಿ ಮನರಂಜನೆಯನ್ನುಂಟು ಮಾಡುವುದು, ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವನ್ನು ಪ್ರತಿಬಿಂಬಿಸುವುದು, ಆಯಾ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿ ಸಫಲವಾಗಿಸುವುದು ಅನೇಕ ವಿಧವಾದ ಸತ್ಪಯೋಜನಗಳನ್ನು ಹೊಂದಿವೆ.

ಈ ಪುಸ್ತಕವು ಇಂತಹ ಉತ್ತಮ, ಸತ್ಸಂಪ್ರದಾಯದ ಹಾಡುಗಳ ಸತ್ಸಂಕಲನವಾಗಿದೆ.

 180

In stock